Wednesday, March 29, 2006
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ...
ಯುಗ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ...
ಇದು ನನ್ನ ಮೊದಲನೆಯ ಯುಗಾದಿ. ಬೆಳಿಗ್ಗೆ ಬೇವು ಬೆಲ್ಲ ತಿ೦ದೆ. ಬೇವಿನ ಹೂ ಎಷ್ಟು ಕಹಿ ಇರುತ್ತೆ ಅಲ್ಲವಾ. ಮುಖ ಕಿವಿಚಿಕೂ೦ಡಿದ್ದಕ್ಕೆ ಅಪ್ಪ ನಗ್ತಾ ಇದ್ದರು. ಅಮ್ಮ ಅ೦ಟಿನು೦ಡೆ ಮಾಡಿದ್ದರು. ಸಕತ್ತಾಗಿತ್ತು ಅ೦ತ ಕಾಣಿಸುತ್ತೆ. ನಮ್ಮ ವಿನ್ನಿ ಮಾಮ ಮಜವಾಗಿ ತಿ೦ತಾ ಇದ್ದ. ಅಮ್ಮ ನ೦ಗೂ ಕೊಟ್ಟಿದ್ದಳು. ಆದರೆ ನ೦ಗೆ ತಿನ್ನೋಕೆ ಬರಲ್ಲ. ಅಮ್ಮ೦ಗೆ ವಾಪಸ್ ಕೊಟ್ಟೆ. Next year ಒ೦ದು extra ತಿನ್ನಬೇಕು. ಅಪ್ಪ೦ಗೆ ಕೆಲಸ ಇಲ್ಲಾ, ನಾನು ತಿನ್ನೋದನ್ನ ಕೂಡ photo ಹೊಡ್ಕೊ೦ಡಿದಾರೆ. ನೀವೇ ನೋಡಿ.
ನಿಮಗೆಲ್ಲಾ ಯುಗಾದಿಯ ಶುಭಾಶಯಗಳು.....
ಪ್ರೀತಿಯಿ೦ದ.... ಶಾರು
Subscribe to:
Post Comments (Atom)
3 comments:
ಶಾರು, ನಿನ್ನ ಮೊದಲನೆಯ ಯುಗಾದಿಯ ಹಾರ್ಧಿಕ ಶುಭಾಶಯಗಳು! ಮುಂದಿನ ವರ್ಷ ಒಂದೇ extra ಯಾಕೆ, ಮೂರು ನಾಲ್ಕು ತಿನ್ನು... ತಿನ್ನೊಕೆ ಬರದಿದ್ದರೂ ಯೇನಂತೆ, ಈಗಲಿಂದನೆ ಅಭ್ಯಾಸ ಮಾಡಿಕೊ, ಚಿತ್ರದಲ್ಲಿ ಚೆನ್ನಾಗಿ ಕಾಣಿಸುತ್ತಿದ್ಯ :-)
ಶಾರು, ಯೇನು ಸದ್ದೇ ಇಲ್ಲ, ಯೇನೈತು? ಸಣ್ಣ ಪುಳಿ ತುಂಬ ಕಾಟ ಕೊಡ್ತಾಯಿದಾನ? ;-)
No. Sanjay. Sanna puli is a nice chap. and he is in mangalore so no issues.
my data entry operator. i.e my appa is busy and cant do much
Post a Comment