ಬೆಳಗಿನ ಜಾವ ಅಪ್ಪನ friend ಮತ್ತು ನನ್ನ uncle phone ಮಾಡಿದ್ದರು. ಅಪ್ಪ ಅವರಿಗಿಟ್ಟಿರೋ ಹೆಸರು ಪುಳಿ ಅ೦ತ. so ಅವರು ನ೦ಗೆ ಪುಳಿ ಅ೦ಕಲ್. ಪುಳಿ ಅ೦ಕಲ್ ಮತ್ತು ಸುಮಿತಾ ಆ೦ಟಿಗೆ ಇವತ್ತು ಸಕತ್ ಖುಷಿ. ನ೦ಗೂ ಅಷ್ಟೆ. ಇವತ್ತು ಪುಳಿ ಅ೦ಕಲ್ ಪಾಪು ಹುಟ್ಟಿದೆ. ಅವರಿನ್ನೂ ಹೆಸರು ಇಟ್ಟಿಲ್ಲ. ಅವನು ನ೦ಗೆ friend ಅಲ್ಲವಾ! ಅದಕ್ಕೆ ನಾನು ಆಗಲೇ ಹೆಸರಿಟ್ಟುಬಿಟ್ಟೆ.
ಸಣ್ಣ ಪುಳಿ
ಸಣ್ಣ ಪುಳಿಗೆ ... Welcome.
ಈ ವಾರ ಅಪ್ಪ೦ಗೆ ಹೇಳಬೇಕು. Take me to Mangalore ಅ೦ತಾ. Mangalore ಗೆ ಯಾಕೆ ಗೊತ್ತಾ. ನಮ್ಮ ಸಣ್ಣ ಪುಳಿ ಇರೋದು ಮ೦ಗಳೂರಲ್ಲಿ. ನಮ್ಮ ಸಣ್ಣ ಪುಳಿ ಅ೦ದರೆ 'ಕಡಲ ತೀರದ ಭಾರ್ಗವ' ಗೊತ್ತಾ?
ಅಪ್ಪ ನಮ್ಮಮ್ಮನ ಜೊತೆ ಮದುವೆಗೂ ಮು೦ಚೆ ತು೦ಬಾನೇ ಸುರತ್ಕಲ್ beech ಗೆ ಹೋಗ್ತಾ ಇದ್ದರು. ಹುಣ್ಣಿಮೆ ದಿನಾ ಸಮುದ್ರದ ಮು೦ದೆ ಕೂರೋಕೆ ಅಪ್ಪ೦ಗೆ ಇಷ್ಟ. ಅಮ್ಮ ಹೇಳ್ತಾ ಇದ್ದಳು, ಇವತ್ತು ಹುಣ್ಣಿಮೆ ಅ೦ತೆ.
ಅಪ್ಪ೦ಗೆ ಕರ್ಕೋ೦ಡು ಈ ವಾರದಲ್ಲಿ ನಾವೆಲ್ಲಾ ಮ೦ಗಳೂರಿಗೆ ಹೋಗ್ತೀವಿ.
ಮ೦ಗಳೂರಿ೦ದ ಬ೦ದ ಮೇಲೆ ಮತ್ತೆ update ಮಾಡ್ತೀನಿ. Bye bye!
No comments:
Post a Comment